ನನ್ನ ಕವನ
ಕಡಲ ಬದಿಯಲ್ಲಿ
ನೀ ನಿಂತಿರಲು
ನರಳಿತು ಹಿತವಾಗಿ ಮರಳು
ನೇಸರ ಮುಳುಗಲು ಮರೆತ
ಮೀನುಗಳಿಗೂ ಪುಳಕ
ಕಡಲಕ್ಕಿಗಳು ಮರೆತವು ಜಳಕ
ನಿನ್ನ ಕಂಡಾಗ
ಬೆಳದಿಂಗಳಿಗೂ ಹರೆಯ
ಹುಣ್ಣಿಮೆ ಚಂದಿರ ನಿನ್ನ ಗೆಳೆಯ
ಹಾರೋ ಮುಂಗುರುಳು ಮರೆತು
ನೀ ನಕ್ಕಾಗ, ಮುತ್ತುಗಳು ನಾಚಿ
ಕಪ್ಪೆಚಿಪ್ಪಿನೊಳಗೆ ಬಚ್ಚಿಕೊಂಡವು
ಅಲೆಗಳಿಗೂ ಆಸೆ
ನಿನ್ನ ಕಾಲನ್ನು ಸವರುತ್ತ ಸಾಗುತ್ತಿದ್ದವು
ನನ್ನಲ್ಲಿ ಕಡಲ ಭೋರ್ಗರೆತ
ನಿನಗಾವುದರ ಪರಿವೆಯಿಲ್ಲ
ಅರಿವೆಯೂ ನಿನಗಿಲ್ಲ
ನೀನು ನನ್ನ ಕವನ